ಏಕ ಕೋಶೀಯ ಮಾನವ ಜೀವಾಣುವು
ಕ್ರಿಯಾತ್ಮಕ ಗತಿಗೆ ಒಳಪಟ್ಟು
ಸಹಸ್ರ ಕೋಟಿ ಕೋಶಗಳ
ವಯಸ್ಕನಾಗುವುದು ಬಹುಶಃ
ಪ್ರಕೃತಿಯ ಎಲ್ಲ ಚಮತ್ಕಾರಗಳಲ್ಲಿ
ಅತ್ಯಂತ ಮಹತ್ತರವಾದದ್ದು
ಈಗ ಸಂಶೋಧಕರು ತಿಳಿದಿರುವಂತೆ
ದಿನನಿತ್ಯದ ಅನೇಕ ಕಾರ್ಯಗಳು
ವಯಸ್ಕರ ದೇಹದಲ್ಲಿ ಘಟಿಸುತ್ತಿದ್ದು-
ಗರ್ಭಧಾರಣೆಯ ಅವಧಿಯಲ್ಲಿ ಅವು
ಸ್ಥಿರಗೊಳ್ಳುತ್ತವೆ
ಅನೇಕ ವೇಳೆ ಜನನಕ್ಕಿಂತ ಬಹು
ಮುಂಚಿತವಾಗಿಯೆ.
ಜನನ ಪೂರ್ವದ ಅಭಿವೃದ್ಧಿಯನ್ನು
ಹೆಚ್ಚಾಗಿ ಸಿದ್ಧತಾವಧಿ ಎಂದು ಅರ್ಥ
ಮಾಡಿಕೊಳ್ಳಲಾಗಿದೆ.
ಈ ಅವಧಿಯಲ್ಲಿ ಬೆಳೆಯುತ್ತಿರುವ ಮಾನವ
ಅನೇಕ ರಚನೆಗಳನ್ನು ಸಂಪಾದಿಸುತ್ತಾನೆ,
ಹಾಗೂ ಅವಶ್ಯಕ ಅನೇಕ ಕುಶಲತೆಯನ್ನು
ಅಭ್ಯಸಿಸುತ್ತಾನೆ.
ಜನನದ ನಂತರದ ಉಳಿವಿಗಾಗಿ.
Chapter 2 Terminology
ಸಾಧಾರಣವಾಗಿ ಗರ್ಭಧಾರಣೆಯು
38 ವಾರಗಳವರೆಗೆ ಕೊನೆಗೊಳ್ಳುತ್ತದೆ.
ಇದು ನಿಶೇಚನ ಅವಧಿ ಅಥವಾ,
ಗರ್ಭಧಾರಣೆಯಿಂದ ಜನನದವರೆಗಿನ
ಸಮಯವಾಗಿರುತ್ತದೆ.
ನಿಶೇಚನ ನಂತರದ ಮೊದಲ
8 ವಾರಗಳಅವಧಿಯಲ್ಲಿ,
ಬೆಳೆಯುವ ಮಾನವ ರಚನೆಯನ್ನು
ಭ್ರೂಣವೆಂದು ಕರೆಯಲಾಗುತ್ತದೆ,
ಇದರ ಅರ್ಥ ಅಂತರ್ ಬೆಳವಣಿಗೆ ಎಂದು."
ಈ ಕಾಲವನ್ನು ಭ್ರೂಣಾವಧಿ ಎಂದು
ಕರೆಯಲಾಗುತ್ತದೆ,
ಈ ರೂಪದ ಲಕ್ಷಣಗಳು
ಹೆಚ್ಚಿನ ಪ್ರಮುಖವಾದ ದೈಹಿಕ
ವ್ಯವಸ್ಥೆಯನ್ನು ಹೊಂದಿರುತ್ತವೆ.
8 ವಾರಗಳ ನಂತರದಿಂದ ಗರ್ಭಾವಸ್ಥೆಯ
ಅಂತ್ಯದ ತನಕ,
"ಬೆಳೆಯುವ ಮಾನವನನ್ನು ಪಿಂಡ
ಎಂದು ಕರೆಯಲಾಗುತ್ತದೆ."
ಇದರರ್ಥ ಇನ್ನು ಜನಿಸದ ಸಂತಾನ
ಎಂದು."
ಈ ಕಾಲಾವಧಿಯನ್ನು ಪಿಂಡಾವಧಿ
ಎಂದು ಕರೆಯಲಾಗುತ್ತದೆ,
ಆಗ ದೇಹವು ವಿಸ್ತಾರವಾಗಿ ಬೆಳೆಯುವುದು
ಹಾಗೂ ವ್ಯವಸ್ಥೆಗಳು ಕಾರ್ಯಶೀಲವಾಗುತ್ತದೆ.
ಈ ಕಾರ್ಯಕ್ರಮದ ಎಲ್ಲಾ ಭ್ರೂಣ
ಹಾಗೂ ಪಿಂಡಾವಸ್ಥೆಗಳು
ನಿಶೇಚನ ಅವಧಿಗೆ ಸಂಬಂಧಿಸಿದುದಾಗಿದೆ.