Skip Navigation
The Endowment for Human Development
The Endowment for Human Development
Improving lifelong health one pregnancy at a time.
Donate Now Get Free Videos

Multilingual Illustrated DVD [Tutorial]

The Biology of Prenatal Development




ಪ್ರಸವ ಪೂರ್ವ ಬೆಳವಣಿಗೆ ಜೀವಶಾಸ್ತ್ರ

.ಕನ್ನಡ [Kannada]


National Geographic Society This program is distributed in the U.S. and Canada by National Geographic and EHD. [learn more]

Choose Language:
Download English PDF  Download Spanish PDF  Download French PDF  What is PDF?
 

Chapter 43   6 to 7 Months (24 to 28 Weeks): Blink-Startle; Pupils Respond to Light; Smell and Taste

24 ವಾರಗಳ ವೇಳೆಗೆ ಕಣ್ಣು ರೆಪ್ಪೆಗಳು ಮತ್ತೆ ತೆರೆಯುವವು ಹಾಗೂ ಭ್ರೂಣವು ಕಣ್ಣುರೆಪ್ಪೆ ಬಡಿಯುವ ಪ್ರತಿಕ್ರಿಯೆ ನೀಡುವುದು. ಆಕಸ್ಮಿಕವಾದ, ದೊಡ್ಡ ಶಬ್ಧಗಳಿಗೆ ನೀಡುವ ಈ ಪ್ರತಿಕ್ರಿಯೆ ವಿಶೇಷವಾಗಿ ಹೆಣ್ಣು ಭ್ರೂಣದಲ್ಲಿ ಶೀಘ್ರವಾಗಿ ಬೆಳೆಯುವುದು.

ವಿವಿಧ ಶೋಧಕರು ವರದಿ ಮಾಡಿರುವಂತೆ ದೊಡ್ಡ ಶಬ್ದಗಳಿಗೆ ತೆಗೆದುಕೊಳ್ಳುವುದರಿಂದ ಭ್ರೂಣದ ಆರೋಗ್ಯ ದುಷ್ಪರಿಣಾಮಕ್ಕೆ ಒಳಗಾಗಬಹುದು. ತಕ್ಷಣದ ಪರಿಣಾಮಗಳೆಂದರೆ ದೀರ್ಘಗೊಂಡ ಹೆಚ್ಚಿದ ಹೃದಯ ಬಡಿತ, ಅತಿಯಾದ ಭ್ರೂಣದ ಆಹಾರ ಸೇವಿಸುವ ಕಾರ್ಯ, ವರ್ತನೆಯಲ್ಲಿ ವಿಪರೀತ ಬದಲಾವಣೆ. ದೀರ್ಘಕಾಲದ ಪರಿಣಾಮದಿಂದ ಕಿವಿಯ ಗ್ರಹಣ ಶಕ್ತಿ ನಷ್ಟವಾಗಬಹುದು.

ಭ್ರೂಣದ ಉಸಿರಾಟದ ದರವು ಅತಿಯಾಗಿ ಪ್ರತಿ ನಿಮಿಷ 44 ಶ್ವಾಸ-ಉಚ್ಛ್ವಾಸಗಳನ್ನು ಕೈಗೊಳ್ಳಬಹುದು.

ಗರ್ಭಾವಧಿಯ 3ನೇ ಭಾಗದಲ್ಲಿ, ಮೆದುಳಿನ ಶೀಘ್ರ ಬೆಳವಣಿಗೆಯು ಶೇ 50 ಕ್ಕಿಂತ ಹೆಚ್ಚಿನ ಶಕ್ತಿ ಬೇಕಾಗಬಹುದು ಈ ಪ್ರಮಾಣ ಬ್ರೂಣ ಬಳಸುವ ಒಟ್ಟು ಶಕ್ತಿಯದಾಗಿದೆ. ಮೆದುಳಿನ ಭಾರವು ಶೇ 400 ರಿಂದ 500 ರಷ್ಟು ಹೆಚ್ಚುವುದು.

26 ವಾರಗಳ ವೇಳೆಗೆ, ಕಣ್ಣಿನಲ್ಲಿ ಅಶ್ರುಗಳು ಉತ್ಪಾದನೆಗೊಳ್ಳುವವು.

ಕಣ್ಣಿನ ಕೃಷ್ಣಪಟಲ 27 ವಾರಗಳ ವೇಳೆಗೆ ಬೆಳಕಿಗೆ ಪ್ರತಿಕ್ರಿಯೆ ನೀಡಲಾರಂಭಿಸುತ್ತದೆ. ಈ ಪ್ರತಿಕ್ರಿಯೆಯು ಬೆಳಕಿನ ಪ್ರಮಾಣವನ್ನು ನಿಯಂತ್ರಿಸುವುದು ಬದುಕಿನುದ್ದಕ್ಕೂ ಅಕ್ಷಿಪಟಲವನ್ನು ತಲುಪುವ ಬೆಳಕಿನ ಪ್ರಮಾಣವನ್ನು.

ಅವಶ್ಯಕ ಎಲ್ಲ ಅಡಕಾಂಶಗಳು ಘ್ರಾಣದ ಕಾರ್ಯಶೀಲತೆಗೆ ಬೇಕಾದವುಗಳು ಕ್ರಿಯಾಶೀಲವಾಗುವವು. ಅವಧಿಗೂ ಮುನ್ನ ಜನಿಸಿದ ಶಿಶುಗಳ ಅಧ್ಯಯನವು, ತೋರುವಂತೆ, ವಾಸನೆ ಪತ್ತೆಹಚ್ಚುವ ಸಾಮರ್ಥ್ಯ ನಿಶೇಚನದ 26 ವಾರಗಳಷ್ಟು ಮೊದಲೇ ಪ್ರಾರಂಭವಾಗುವುದು.

ಆಮ್ನಿಯೋಟಿಕ್ ಲೋಳೆಯಲ್ಲಿ ಸಿಹಿ ವಸ್ತುವನ್ನು ಇರಿಸಿದರೆ ಭ್ರೂಣದ ಸೇವಿಸುವ ದರ ಹೆಚ್ಚುವುದು. ವ್ಯತಿರಿಕ್ತವಾಗಿ, ಭ್ರೂಣದ ಸೇವನೆಯ ದರ ಕಡಿಮೆಯಾಗುವುದು ಕಹಿ ವಸ್ತುವನ್ನು ಆ ಜಾಗದಲ್ಲಿ ಇರಿಸಿದಾಗ. ಮುಖದ ಚಹರೆಯಲ್ಲಿ ಬದಲಾವಣೆ ಕಾಣುವುದು.

ಕಾಲಿನ ಚಲನೆಯಂತಹ ವಿವಿಧ ಶ್ರೇಣಿಯ ಕ್ರಮದ ಮೂಲಕ- ಇದು ನಡಿಗೆಯಂತಿರುವುದು-ಭ್ರೂಣವು ಲಾಗ ಹೊಡೆಯುವುದು.

ಹಾಗೂ ಜನನದ ನಂತರ ಶಕ್ತಿ ಸಂಗ್ರಹಣೆಯ ಕಾರ್ಯ ಮಾಡುತ್ತದೆ.

Chapter 44   7 to 8 Months (28 to 32 Weeks): Sound Discrimination, Behavioral States

28 ವಾರಗಳ ವೇಳೆಗೆ, ಭ್ರೂಣವು ತನ್ನ ಭೇದ ಪ್ರಜ್ಞೆಯೊಂದಿಗೆ, ಉನ್ನತ ಹಾಗೂ ಕೆಳಸ್ತರದ ಶಬ್ದಗಳನ್ನು ಗುರುತಿಸಬಲ್ಲದು.

30 ವಾರಗಳ ವೇಳೆಗೆ, ಉಸಿರಾಟದ ಚಲನೆಗಳು ಸಾಮಾನ್ಯವಾಗಿರುತ್ತವೆ, ಸರಾಸರಿ ಭ್ರೂಣದಲ್ಲಿ ಶೇ. 30 ರಿಂದ 40 ರಷ್ಟು ಸಮಯ ಸಂಭವಿಸುತ್ತದೆ.

ಗರ್ಭಾವಧಿಯ ಕೊನೆಯ 4 ತಿಂಗಳುಗಳಲ್ಲಿ ಭ್ರೂಣವು ಸಮನ್ವಯ ಚಟುವಟಿಕೆಗಳ ಅವಧಿಯನ್ನು ಪ್ರದರ್ಶಿಸುವುದು. ಇದರಲ್ಲಿ ನಿಯತವಾದ ವಿರಾಮಗಳು ಇರುತ್ತವೆ. ಈ ಬಗೆಯ ವರ್ತನೆಯ ಸ್ಥಿತಿಯು, ಎಂದೆಂದಿಗೂ ಹೆಚ್ಚುವ ಸಂಕೀರ್ಣತೆಯನ್ನು- ಕೇಂದ್ರ ನರವ್ಯವಸ್ಥೆಯಲ್ಲಿ- ತೋರುವುದು.

Chapter 45   8 to 9 Months (32 to 36 Weeks): Alveoli Formation, Firm Grasp, Taste Preferences

ಸುಮಾರು 32 ವಾರಗಳ ವೇಳೆಗೆ, ನಿಜವಾದ ಆಲ್ವಿಯೋಲಿ, ಅಥವಾ ವಾಯುಚೀಲ ಕೋಶಗಳು, ಶ್ವಾಸಕೋಶದಲ್ಲಿ ಬೆಳೆಯುವವು. ಜನನದ ನಂತರದ 8 ವರ್ಷಗಳವರೆಗೂ ಇವುಗಳ ಬೆಳವಣಿಗೆ ಮುಂದುವರೆಯುತ್ತದೆ

35ನೇ ವಾರದಲ್ಲಿ ಭ್ರೂಣವು ಬಿಗಿಯಾದ ಕರಗ್ರಹಿಕೆಯನ್ನು ಹೊಂದಿರುತ್ತದೆ.

ಭ್ರೂಣವು ವಿವಿಧ ವಸ್ತುಗಳಿಗೆ ತೆರೆದುಕೊಳ್ಳುವ ಮೂಲಕ, ಜನನದ ನಂತರ ವಾಸನಾದ್ಯತೆಯನ್ನು ಬೆಳೆಸಿಕೊಳ್ಳುತ್ತವೆ. ಉದಾಹರಣೆಗೆ, ಭ್ರೂಣದ ತಾಯಿ ಸೋಪಿನಕಾಳನ್ನು ಸೇವಿಸುತ್ತಿದ್ದರೆ ಇದರಲ್ಲಿ ಲಿಕೊರೈಸ್ ಎಂಬ ವಸ್ತುವು ಈ ರುಚಿ ನೀಡುತ್ತದೆ, ಜನನದ ನಂತರವೂ ಸೋಪಿನಕಾಳಿನ ಸೇವನೆಗೆ ಆದ್ಯತೆ ದೊರೆಯುವುದು. ಭ್ರೂಣದಲ್ಲಿ ನವಜಾತರು ಸೋಪಿನಕಾಳಿನ ಅಭ್ಯಾಸ ಇರದಿದ್ದರೆ ಈಗ ಅದನ್ನು ಇಷ್ಟಪಡುವುದಿಲ್ಲ.

Chapter 46   9 Months to Birth (36 Weeks through Birth)

ಭ್ರೂಣವು ಪ್ರಸವ ವೇದನೆ ನೀಡಲು ಆರಂಭಿಸುವುದು ಎಸ್ಟ್ರೋಜನ್ ಎಂಬ ಹಾರ್ಮೋನ್ ನನ್ನು ಬಿಡುಗಡೆಗೊಳಿಸುವ ಮೂಲಕ ಹಾಗೂ ಈಗ ಭ್ರೂಣದಿಂದ ನವಜಾತಶಿಶುವಿನ ಸ್ಥಿತಿಗೆ ಸ್ಥಿತ್ಯಂತರಗೊಳ್ಳುವುದು.

ಪ್ರಸವವೇದನೆಯು ಶಕ್ತಿಯುತ ಗರ್ಭಾಶಯದ ಸಂಕುಚಿತತೆಯಿಂದಾಗುವುದು, ಇದರಿಂದ ಶಿಶುವಿನ ಜನನವಾಗುವುದು.

ನಿಶೇಚನದಿಂದ ಜನನದವರೆಗೂ ಹಾಗೂ ನಂತರವು, ಮಾನವನ ಬೆಳವಣಿಗೆಯು, ಕ್ರಿಯಾತ್ಮಕ, ನಿರಂತರ, ಸಂಕೀರ್ಣವಾಗಿರುತ್ತದೆ ಈ ಆಕರ್ಷಕ ಪ್ರಕ್ರಿಯೆಯ ಬಗೆಗಿನ ಹೊಸ ಸಂಶೋಧನೆಗಳು ಭ್ರೂಣ ಬೆಳವಣಿಗೆಯ ಮಹತ್ವದ ಪರಿಣಾಮಗಳು ಬದುಕಿನುದ್ದಕ್ಕೂ ಆರೋಗ್ಯದ ಮೇಲೆ ಹೊಂದುರುವ ಪ್ರಭಾವವನ್ನು ತೋರುತ್ತವೆ.

ಮಾನವನ ಆರಂಭಿಕ ಬೆಳವಣಿಗೆಯ ಅರಿವು ಹೆಚ್ಚಿದಂತೆ, ಆರೋಗ್ಯ ವರ್ಧಿಸುವ ನಮ್ಮ ಸಾಮರ್ಥ್ಯ ಕೂಡ ಹೆಚ್ಚುತ್ತದೆ- ಜನನದ ಮೊದಲು ಹಾಗೂ ನಂತರದ ಅವಧಿಯಲ್ಲು.